ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಂಜೇಶ್ವರ : ಕುಂಬಳೆ ಟಯರ್ ಅಂಗಡಿ ಬೆಂಕಿಗಾಹುತಿ

ಮಂಜೇಶ್ವರ : ಕುಂಬಳೆ ಟಯರ್ ಅಂಗಡಿ ಬೆಂಕಿಗಾಹುತಿ

Sun, 14 Feb 2010 03:27:00  Office Staff   S.O. News Service

ಮಂಜೇಶ್ವರ ಫೆಬ್ರವರಿ ೧೩ ಶನಿವಾರ : ಚಿತ್ರ ಜೊತೆಗಿದೆ. ವಿದ್ಯುತ್ ಶಾಟ್ ಸರ್ಕ್ಯೂಟ್ನಿಂದ ಕುಂಬಳೆ ಪೇಟೆಯಲ್ಲಿ ಕಾರ್ಯಾಚರಿಸುತ್ತಿರುವ ಟಯರ್ ಅಂಗಡಿಯೊಂದಕ್ಕೆ ಬೆಂಕಿ ಹಚ್ಚಿಕೊಂಡಿದ್ದು ಸಂಪೂರ್ಣ ಉರಿದು ನಾಶಗೊಂಡಿದೆ, ಕಳೆದ ರಾತ್ರಿ ಅಂಗಡಿ ಮಾಲಕ ಬಸ್ಕರ್ ಅಂಗಡಿ ಮುಚ್ಚಿ ಮನೆಗೆ ತೆರಳಿದ್ದರು. ಸುಮಾರು ೮ ಘಂಟೆ ಬೆಂಕಿ ಅನಾಹುತ ಉಂಟಾಗಿದೆಯೆನ್ನಲಾಗಿದೆ, sಸುಮಾರು ಒಂದು ಲಕ್ಷ ನಷ್ಟ ಅಂದಾಜಿಸಲಾಗಿದೆ. ಕಾಸರಗೋಡಿನಿಂದ ತಲುಪಿದ ಅಗ್ನಿ ಶಾಮಕ ಧಲದ ಸಹಾಯದಿಂದ ಬೆಂಕಿಯನ್ನು ನಂದಿಸಲಾಯಿತು. ಕುಂಬಳೆ ಪೇಟೆಯಲ್ಲಿ ಪದೆ ಪದೇ ಉಂಟಾಗುತ್ತಿರುವ ಬೆಂಕಿ ಅನಾಹುತದಿಂದ ವ್ಯಾಪಾರಿಗಳು ಹಾಗೂ ನಾಗರಿಕರು ಆತಂಕಕ್ಕೀಡಾಗಿದ್ದಾರೆ,

 

 

ಬಸ್ ನಿರ್ವಾಹಕನ ಮೇಲೆ ಹಲ್ಲೆ : ದೂರು ದಾಖಲು

 

ಮಂಜೇಶ್ವರ ಫೆಬ್ರವರಿ ೧೩ ಶನಿವಾರ : ಕರ್ನಾಟಕ ಸಾರಿಗೆ ಇಲಾಖೆಯ ಬಸ್ಸ್ ನಿರ್ವಾಹಕನ ಮೇಲೆ ಹಲ್ಲೆ ನಡೆದ ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ನಿರ್ವಾಹಕ ಮುನಹಳ್ಲಿಯ ಅಜಪ್ಪ(೨೬) ಹಲ್ಲೆಗೊಳಗಾದ ನಿರ್ವಾಹಕ ಪ್ರಕರಣ ಸಂಭಂದ ಪಟ್ಟಂತೆ ಪ್ರಕಾಶ್ ಎಂಬಾತನ ವಿರುದ್ದ ಮಂಜೇಶ್ವರ ಪೋಲೀಸತು ಕೇಸು ದಾಖಲಿಸಿಕೊಂಡಿದ್ದಾರೆ.

 

ಆರಿಫ್ ಮಚ್ಚಂಪಾಡಿ, ಮಂಜೇಶ್ವರ

 

 

 

 

 

 


Share: